ಭಾನುವಾರ, ಜುಲೈ 24, 2011

ಱೞ ಕುಳ ದ ಗುಟ್ಟು

ಱೞ ಕುಳ ದ ಗುಟ್ಟು ಈವೊತ್ತು ಗೊತ್ತಾಯಿತು.
೧. ಈ ಅಲುವಾಟ ಅಂದರೆ ಱೞ ಕುಳ ಅಂತ ಹೇಳುವುದು ಹಿಂದಿನಿಂದಲೂ ಕನ್ನಡದಲ್ಲಿ ಬಂದ ವಾಡಿಕೆ. ಈವೊತ್ತು ಸೇಡಿಯಾಪು ಅವರ ’ವಿಚಾರ ಪ್ರಪಂಚ’ ಓದುತ್ತಿರುವಾಗ ಇದು ತಿಳಿಯಿತು.. ಅವರು ಹೀಗೆ ಹೇಳಿದ್ದಾರೆ( ಸುಳುವಾಗಿ ತಿಳಿಯಲು ಸರಳಗೊಳಿಸಿರುವೆ)

ಱ - ೞ - ಇವೆರಡರ ಉಲಿಕೆಯನ್ನು ಬರವಣಿಗೆಯಲ್ಲಿ ತೋರಿಸುವುದು ಕಶ್ಟವೆನಿಸಿದಾಗ ಉಲಿಕೆಯ ಬದಲಾಗಿ ಬರಿಗೆ/ಗುರುತುಗಳಲ್ಲಿ ಇರುವ ಹೋಲಿಕೆಯನ್ನು ತೋರಿಸಿ ೞ ವನ್ನು ಱ ಜೊತೆ ಹೇಳಿದಾಗ ಮಂದಿಗೆ ಱ - ೞ ಎರಡನ್ನು ಒಂದೇ ತರ ಬರೆಯುವುದು ಎಂಬುದು ಗೊತ್ತಾಗುತ್ತಿತ್ತು.

ಕು-ಳ -- ಬಹಳ ಹಿಂದಿನ ಕನ್ನಡದ ಲಿಪಿ ಯಲ್ಲಿ ’ಕು’ -’ಳ’ ಗುರುತುಗಳಲ್ಲಿ ಹೋಲಿಕೆಯಾಗುತ್ತಿತ್ತು..

ಈ ವಾಡಿಕೆಯಿಂದ ಅವುಗಳ ಉಲಿಕೆ ಹೇಗೆ ಎಂಬುದನ್ನು ತಿಳಿಸಿಕೊಡುವುದು ಅದರ ಗುರಿಯಾಗಿರಲಿಲ್ಲ.. ಬದಲಿಗೆ ಕಣ್ಣಿಗೆ ಅದರ ಮೂಲಕ ಮೆದುಳಿಗೆ ೞ ಮತ್ತು ಳ ಇರುವ ಬೇರೆತನವನ್ನು ತಿಳಿಸಿಕೊಡುವುದು ಇದರ ಗುರಿಯಾಗಿದ್ದಿರಬಹುದು.